ಇದು ಒಂದು ಸ್ತ್ರೀ ಜಾತಕ .
ಜೀವಕಾರಕ ಶುಕ್ರನು ಪೃಥ್ವಿ ತತ್ತ್ವವಾದ ಕನ್ಯಾರಾಶಿಯಲ್ಲಿ ಇರುವುದರಿಂದ ಈಕೆಯಲ್ಲಿ ತಾಳ್ಮೆ ಗುಣ ಹಾಗೂ ವ್ಯವಹಾರ ಗುಣಗಳು ಇರುತ್ತದೆ.
1. ಜಾತಕಿಯು ಏನೇ ಮಾಡಿದರು ಅದರಲ್ಲಿ ತನಗೆ ಏನು ಲಾಭಯೆಂದು ನೋಡಿಕೂಳ್ಳುವರು. ಲಾಭವಿಲ್ಲದೆ ಯಾವ ಕೆಲಸವನ್ನು ಮಾಡಲು ಇಚ್ಚಿಸುವುದಿಲ್ಲ.
2. ಜಾತಕಿಯು ದ್ವಿಸ್ವಭಾವ ರಾಶಿಯಲ್ಲಿ ಇರುವುದರಿಂದ ಈಕೆ ಚಂಚಲ ಮನಸ್ಸಿನವಳಾಗಿ ಇರುತ್ತಾಳೆ.
3. ಜಾತಕಿಯು ಸಾತ್ವೀಕ ಗುಣದಲ್ಲಿ ಇರುವುದರಿಂದ ಸ್ವಯಂಪ್ರೇರಿತರಾಗಿ ಬೇರೆಯವರಿಗೆ ಸಹಾಯ ಮಾಡಲು ಹೋಗಿ [ತೋರಿಕೆಗೆ] , ಇವರು ನಷ್ಟ ಹೊಂದುತ್ತಾರೆ.
4. ಜೀವಕಾರಕ ದಿವಾದಲ್ಲಿ ಇರುವುದರಿಂದ ಜಾತಕೀಯ ಜೀವನ ಶೈಲಿಯು ಶಿಸ್ತುಭದ್ದವಾಗಿರುತ್ತದೆ.
5. ಜೀವಕಾರಕ ಧಾರಣದಲ್ಲಿ ಇರುವುದರಿಂದ ಜಾತಕಿಗೆ ಅಗಾಧವಾದ ನೆನಪಿನ ಶಕ್ತಿ ಇರುತ್ತದೆ.
6. ಜೀವಕಾರಕ ಮನುಷ್ಯ ರಾಶಿಯಲ್ಲಿ ಇರುವುದರಿಂದ ಇವರು ಎಲ್ಲರನ್ನೂ ತಿರಸ್ಕಾರ ಮನೋಭಾವದಿಂದ ನೋಡುತ್ತಾರೆ.
ಇವರ ವಿವಾಹದ ನಂತರ ಜೀವನವನ್ನು ನೋಡುವುದಾದರೇ,
ಗಂಡಾಕಾರಕ ಕುಜನು ಕಾಲಪುರುಷನ ಎರಡನೇ ಮನೆಯಾದ ವೃಷಭದಲ್ಲಿ ಸ್ಥಿತನಾಗಿದ್ದಾನೆ.
7. ಗಂಡಾಕಾರಕ ಕುಜನು ಶ್ರಮಜೀವಿಯಾದ ವೃಷಭ ರಾಶಿಯಲ್ಲಿ ಇರುವುದರಿಂದ ಈತನು ತಾನಾಯಿತು ತನ್ನ ಕೆಲಸವಾಯಿತು ಎಂದು ಇರುತ್ತಾನೆ.
8. ಕುಜನು ಸ್ಥಿರ ಸ್ವಭಾವದಲ್ಲಿ ಇರುವುದರಿಂದ ಇವರು ಒಂದೇ ಕಡೆ ಇರಲು ಇಚ್ಛಿಸುತ್ತಾರೆ.
9. ಕುಜನು ನಿಶಾದಲ್ಲಿ ಇರುವುದರಿಂದ ರಾತ್ರಿಯ ಹೊತ್ತು ಕೆಲಸ ಮಾಡಲು ಇಚ್ಛಿಸುತ್ತಾರೆ.
10. ಇವರ ಜೀವನ ಶೈಲಿಯು ಕ್ರಮಬದ್ಧವಾಗಿ ಇರುವುದಿಲ್ಲ.
11. ಇವರಿಗೆ ಕ್ರೀಡೆಯಲ್ಲಿ ಆಸ್ಕ್ತಿ ಇರುತ್ತದೆ.
12. ಇವರಿಗೆ ನಾವು ಏನೇ ಕೊಟ್ಟರು ನಮಗೆ ಅದರ ಹತ್ತು ಪಟ್ಟು ನಮಗೆ ಕೊಡುತ್ತಾರೆ.
13. ಇವರು ಕೆಲಸ ಮುಗಿಸಿ ಮನೆಗೆ ಬಂದರೆ ಮೊದಲು ಊಟವನ್ನು ಕೊಡಬೇಕು.
14. ಗಂಡಾಕಾರಕ ಕುಜನು ಪೃಥ್ವೀ ತತ್ತ್ವದಲ್ಲಿ ಇರುವುದರಿಂದ ಇವರು ಎಲ್ಲರಿಗೂ ಸಹಾಯ ಮಾಡುತ್ತಾರೆ,
15. ಸಹಾಯ ಮಾಡಿಸಿಕೊಂಡವರು ಇವರನ್ನು ನಿರ್ಲಕ್ಷಿಸುತ್ತಾರೆ.
16. ಪೃಥ್ವೀ ತತ್ತ್ವ ರಾಶಿಯು ಪರಾವಲಂಭಿ ರಾಶಿಯಾಗಿರುತ್ತದೆ, ಇವರು ಎಲ್ಲಾ ತತ್ತ್ವದವರ ಸಹಾಯವನ್ನು ತೆಗೆದುಕೊಳ್ಳಬೇಕು.
17. ಇವರು ಏನೇ ಕೆಲಸ ಮಾಡುವುದಾದರು ಮಧ್ಯವರ್ತಿಯ ಸಹಾಯ ತೆಗೆದುಕೊಳ್ಳುತ್ತಾರೆ.
18. ಇವರು ಕಾಗದ ಪತ್ರಗಳನ್ನು ಸರಿಯಾಗಿ ನಿರ್ವಹಿಸುತ್ತಾರೆ. [ ಡಾಕ್ಯುಮೆಂಟೇಶನ್]
19. ಇವರು ತಮ್ಮದೇ ಒಂದು ಗುಂಪನ್ನು ಕಟ್ಟಲಾಗುವುದಿಲ್ಲ.
20. ಇವರಿಗೆ ಲಕ್ ಇರುವುದಿಲ್ಲ .
21. ಇವರಿಗೆ ಸಂತಾನ ಭಾಗ್ಯವು ಸಿಗಲು ವಿಳಂಭವಾಗುವುದು.
22. ತಮ್ಮ ಕೆಲಸ ಕಾರ್ಯಗಳನ್ನು ಮುಂದೂಡುವ ಸ್ವಭಾವವಿರುತ್ತದೆ.
23. ಇವರು ಹೆಂಡತಿಯ ಮಾತನ್ನೂ ಮೀರಿ ಏನನ್ನೂ ಮಾಡುವುದಿಲ್ಲ.
24. ಇವರಿಗೆ ಸಮಯಕ್ಕೆ ಸರಿಯಾದ ಮಾರ್ಗದರ್ಶನ ಸಿಗುವುದಿಲ್ಲ.
25. ಇವರಿಗೆ ಉನ್ನತ ಶಿಕ್ಷಣ ದೊರಕಿರುತ್ತದೆ.
26. ಇವರಲ್ಲಿ ಕೃತಜ್ಞತಾ ಮನೋಭಾವವಿರುತ್ತದೆ.
27. ಇವರಿಗೆ ಏನಾದರು ತೊಂದರೆ ಬಂದರೆ , ಏನುಮಾಡಬೇಕು ಎಂದು ತಿಳಿಯದೆ ಹೆದರಿಬಿಡುತ್ತಾರೆ.
28. ಇವರಿಗೆ ಕೋಪ ಬಂದರೆ ಏನು ಮಾಡುತ್ತಾರೆ ಎಂದು ಅವರಿಗೆ ತಿಳಿಯದು.
29. ಇವರು 90% ಕೆಲಸ ಹಾಗೂ 10% ನಿದ್ರೇ ಮಾಡುವವರು. ಶ್ವಾನ ನಿದ್ರೆ ಎಂದು ಹೇಳ ಬಹುದು.
30. ಇವರು ಬೇರೆಯವರಿಗೆ ಹೊಂದಿಕೊಳ್ಳುವುದು ಕಷ್ಟ.
31. ಇವರು ಅವರದೇ ಒಂದು ಚೌಕಟ್ಟಿನಲ್ಲಿ ಇರುತ್ತಾರೆ. ಯಾರು ಅದರೊಳಗೆ ಹೋಗಲು ಆಗುವುದಿಲ್ಲಾ , ಇವರು ಯಾರನ್ನೂ ಸೇರಿಸಿಕೊಳ್ಳುವುದಿಲ್ಲ.
32. ಇದರಿಂದ ಇವರಿಗೆ ಸಹಾಯ ಸಿಗುವುದು ಕಷ್ಟವಾಗುತ್ತದೆ.
Author: Nadi Astrology Training
Post navigation