ಜಾತಕಿಗೆ ಹೊಗಳಿಕೆ ಸಿಗದಿದ್ದಾಗ ನಿರಾಸೆ

ಇದು ಸ್ತ್ರೀ ಜಾತಕ. 1. ರವಿ +ಶುಕ್ರನ ಸಂಯೋಗವಾಗಿರುವುದರಿಂದ ಹೊಗಳಿಕೆ ಸಿಗದಿದ್ದಾಗ ನಿರಾಸೆ ಸಾಧ್ಯತೆ ಇದೆ. 2. ಜೀವಕಾರಕ ಶುಕ್ರನು ಸ್ತ್ರೀ ರಾಶಿ ತತ್ವದಲ್ಲಿ ಸ್ಥಿತನಾಗಿರುವುದರಿಂದ ಆಲೋಚನೆ ಮತ್ತು ವರ್ತನೆ ಎರಡೂ ಕೂಡ ಸ್ತ್ರೀ ಅಂಶಗಳನ್ನು ಒಳಗೊಂಡಿರುತ್ತವೆ. 3.ದ್ವೀ-ಸ್ವಭಾವದವರಾದ್ದರಿಂದ ಇವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಹೆಚ್ಚು ಕುಶಾಗ್ರಮತಿ ಉಳ್ಳವರು. ಇವರು ಧನಾತ್ಮಕ ಅಥವಾ ರುಣಾತ್ಮಕರೇ ಎಂದು ಕಂಡುಹಿಡಿಯುವುದು ಕೂಡ ಕಷ್ಟ. ವಿಶೇಷವಾಗಿ ಕನ್ಯಾ (18 ವಯಸ್ಸು) ಮತ್ತು ಮೀನ (ಏಕೆಂದರೆ ನೀರಿನಲ್ಲಿ ಏನಿದೆ ಎಂದು) ಕಂಡು ಹಿಡಿಯಲು ಆಗುವುದಿಲ್ಲ. 4. ಚಂದ್ರ ಗ್ರಹ ಯಾವುದೇ ಗ್ರಹದೊಂದಿಗೆ ಸಂಯೋಜನೆ ಹೊಂದಿದರೆ ಆ ಗ್ರಹದ ಮೂಲ ಸತ್ಯಗಳನ್ನು ನಾಶಮಾಡಲು ಚಂದ್ರ ಶಕ್ತಿ ಹೊಂದಿದ್ದಾರೆ. ಹಾಗಾಗಿ ಜಾತಕದ ಪ್ರಕಾರ ಚಂದ್ರನಿಗೆ…

ಜಲ ತತ್ತ್ವ ಹೆಚ್ಚು ಇರುವ ಕಾರಣ ಹೆದರಿಕೆ ಸ್ವಭಾವ, ಗುಪ್ತ ವ್ಯವಹಾರ ಇರುತ್ತದೆ.

1.ಇದು ಪುರುಷ ಜಾತಕ ಜೀವಕಾರಕ ಗುರುವಾಗುತ್ತಾನೆ. 2.ಗುರು ತನ್ನ ಉಚ್ಚ ರಾಶಿಯಾದ ಕಟಕದಲ್ಲಿ ಸ್ಥಿತನಾಗಿದ್ದಾನೆ. 3.ಉಚ್ಚ ಸ್ಥಾನವಾಗಿದ್ದರೂ ನೀರಿನಲ್ಲಿ ಮುಳುಗಿ ರುವುದರಿಂದ ಪ್ರಭಾವ ಕಡಿಮೆ ಇರುತ್ತದೆ. ಆದರೆ 1, 5,9ನೇ ಮನೆಗಳ ಸಂಯೋಗವನ್ನು ತೆಗೆದುಕೊಂಡಾಗ ಅಲ್ಲಿ ಕುಜ ನೀಚನಾಗುವುದರ ಪ್ರಭಾವ, ಇನ್ನೊಂದು ಜಲ ತತ್ವ ರಾಶಿ(5)ರಲ್ಲಿ ಚಂದ್ರನ ನೀಚತ್ವದ ಫಲ, ಹಾಗೂ ಮೀನದಲ್ಲಿ ಬುಧನ ನೀಚತ್ವದ ಫಲಗಳು ಜಾತಕನ ಮೇಲೆ ಪ್ರಭಾವ ಬೀರುತ್ತವೆ. 4.ಕುಜನ ನೀಚತ್ವದ ಸ್ಥಾನದಲ್ಲಿ ಗುರು ಸ್ಥಿತನಾಗಿರುವುದರಿಂದ ಜೀವಿಗೆ ಧೈರ್ಯ ಕಡಿಮೆ, ದೇಹ ಶಕ್ತಿಯ ಕೊರತೆ, ನಿಶ್ಯಕ್ತಿ ಇತ್ಯಾದಿ ಸಮಸ್ಯೆಗಳು ಕಂಡು ಬರಬಹುದು 5.ಜೀವಕಾರಕ ಗುರು ಸ್ಥಿತ ರಾಶಿಯಿಂದ 5ನೇ ಮನೆಯಾದ ಇನ್ನೊಂದು ಜಲ ತತ್ವ ರಾಶಿ ಯಲ್ಲಿ ಅದೇ ಮನೆಯ ಅಧಿಪತಿಯಾದ…

ವಿವಾಹದ ನಂತರ ಜೀವನ

ಇದು ಒಂದು ಸ್ತ್ರೀ ಜಾತಕ . ಜೀವಕಾರಕ ಶುಕ್ರನು ಪೃಥ್ವಿ ತತ್ತ್ವವಾದ ಕನ್ಯಾರಾಶಿಯಲ್ಲಿ ಇರುವುದರಿಂದ ಈಕೆಯಲ್ಲಿ ತಾಳ್ಮೆ ಗುಣ ಹಾಗೂ ವ್ಯವಹಾರ ಗುಣಗಳು ಇರುತ್ತದೆ. 1. ಜಾತಕಿಯು ಏನೇ ಮಾಡಿದರು ಅದರಲ್ಲಿ ತನಗೆ ಏನು ಲಾಭಯೆಂದು ನೋಡಿಕೂಳ್ಳುವರು. ಲಾಭವಿಲ್ಲದೆ ಯಾವ ಕೆಲಸವನ್ನು ಮಾಡಲು ಇಚ್ಚಿಸುವುದಿಲ್ಲ. 2. ಜಾತಕಿಯು ದ್ವಿಸ್ವಭಾವ ರಾಶಿಯಲ್ಲಿ ಇರುವುದರಿಂದ ಈಕೆ ಚಂಚಲ ಮನಸ್ಸಿನವಳಾಗಿ ಇರುತ್ತಾಳೆ. 3. ಜಾತಕಿಯು ಸಾತ್ವೀಕ ಗುಣದಲ್ಲಿ ಇರುವುದರಿಂದ ಸ್ವಯಂಪ್ರೇರಿತರಾಗಿ ಬೇರೆಯವರಿಗೆ ಸಹಾಯ ಮಾಡಲು ಹೋಗಿ [ತೋರಿಕೆಗೆ] , ಇವರು ನಷ್ಟ ಹೊಂದುತ್ತಾರೆ. 4. ಜೀವಕಾರಕ ದಿವಾದಲ್ಲಿ ಇರುವುದರಿಂದ ಜಾತಕೀಯ ಜೀವನ ಶೈಲಿಯು ಶಿಸ್ತುಭದ್ದವಾಗಿರುತ್ತದೆ. 5. ಜೀವಕಾರಕ ಧಾರಣದಲ್ಲಿ ಇರುವುದರಿಂದ ಜಾತಕಿಗೆ ಅಗಾಧವಾದ ನೆನಪಿನ ಶಕ್ತಿ ಇರುತ್ತದೆ. 6. ಜೀವಕಾರಕ…