ಇದು ಒಂದು ವಿವಾಹಿತ ಸ್ತ್ರೀ ಜಾತಕ.
-
ಜೀವಕಾರಕ ಶುಕ್ರನು ಜಲ ತತ್ತ್ವ ರಾಶಿಯಾದ ಮೀನದಲ್ಲಿ ಸ್ಥಿತನಾಗಿದ್ದಾನೆ. ಈ ಜಾತಕಿಯು ಗುಂಪಿನಲ್ಲಿ ಇರಲು ಬಯಸುತ್ತಾರೆ. ಇವರಲ್ಲಿ ಲೀಡರ್ಶಿಪ್ ಗುಣ ಇರುತ್ತದೆ.
-
ಈ ಜಾತಕಿಯು ಧಾರಣದಲ್ಲಿ ಇರುವುದರಿಂದ [ಫೋಕಸ್ಡ್ ಮೈಂಡ್] ಯಾವುದೇ ಕೆಲಸ ಮಾಡಿದರು ಏಕಾಗ್ರತೆಯಿಂದ ಮಾಡುತ್ತಾರೆ.
-
ಈ ಜಾತಕಿಯು ಎಲ್ಲರಲ್ಲಿಯೂ ಭಾವನಾತ್ಮಕ ಸಂಬಂದ ಹೊಂದಿರುತ್ತಾಳೇ. ಈಕೆಯು ಮನೆಯವರನ್ನು ಹಾಗೂ ನೆಂಟರಿಷ್ಟರನ್ನು ಪ್ರೀತಿ ಮಮತೆಯಿಂದ ಆರೈಕೆ ಮಾಡುತ್ತಾರೆ.
-
ಆದರೆ ಮಡಿವಂತಿಕೆ ಹೆಚ್ಚು, ಯಾರನ್ನೂ ಹತ್ತಿರ ಸೇರಿಸುವುದ್ದಿಲ್ಲ.
-
ಇವರು ದಿವಾದಲ್ಲಿ ಇರುವುದರಿಂದ ಹಗಲಿನಲ್ಲಿ ಕೆಲಸ ಮಾಡುತ್ತಾರೆ, ನಿದ್ರೆಗೆಡುವುದಿಲ್ಲ.
-
ಶುಕ್ರ ವಕ್ರೀಯಾಗಿರುವುದರಿಂದ ಇವರಿಗೆ ಲೀಡರ್ಶಿಪ್ ಸಿಗುವುದಿಲ್ಲ ಹಾಗೂ ವೈವಾಹಿಕ ಜೀವನ ಧಾರುಣವಾಗಿರುತ್ತದೆ.
-
ಬೇರೆಯವರು ಮಾಡಿದ ಕೆಲಸ ಇವರಿಗೆ ಇಷ್ಟವಾಗುವುದಿಲ್ಲ. ಹಾಗಾಗಿ ಇವರಿಗೆ ಬೇರೆಯವರ ಸಹಾಯಾಸಿಗುವುದಿಲ್ಲ.
-
ಕೇತು- ತಾಯಿಯ ತಂದೆ ತಾಯಿ – ಇವರು ಕುಜನ ಮನೆಯಾದ ಮೇಷ ರಾಶಿಯಲ್ಲಿ ಸ್ಥಿತರಾಗಿದ್ದಾರೆ. ಅಗ್ನಿ ತತ್ತ್ವವಾದ್ದರಿಂದ ಶ್ರಮಜೀವಿಗಳು.
-
ಚಂದ್ರ ತಾಯಿಕಾರಕ ಮೇಷ ರಾಶಿಯಲ್ಲಿ ಇರುವುದರಿಂದ ಯಾವಾಗಲೂ ಕೆಲಸ ಮಾಡುತ್ತಿರುತ್ತಾರೆ. ಕೇತು ಸಂಯೋಗ ಬರುವುದರಿಂದ ಬೇರೆಯವರ ತಪ್ಪನ್ನು ಚುಚ್ಚಿ ಹೇಳುತ್ತಾರೆ.
-
ರವಿ- ತಂದೆ ಕಾರಕ ರವಿಯು ಅಗ್ನಿತತ್ತ್ವವಾದ ಮೇಷದಲ್ಲಿ ಇರುವುದರಿಂದ ಯಾವಾಗಲು ಚುರುಕಾಗಿ ಕೆಲಸಮಾಡುತ್ತಿದ್ದರು. ಮೇಕೆ ಹೇಗೆ ಎಲ್ಲ ಸೊಪ್ಪನ್ನು ತಿಳಿದಿರುತ್ತದೆಯೋ ಹಾಗೆ ಈಕೆಯ [ರವಿ+ ಬುಧ] ತಂದೆಗೆ ಸಸ್ಯ ಔಷಧಿಯ ಜ್ಞಾನವಿತು ಹಾಗೂ ಒಳ್ಳೆ ವ್ಯಾಪಾರಿಯಾಗಿದ್ದರು.
-
ಗುರು- ಇನ್ಕಮ್ ಕಾರಕ [ಆದಾಯ] ಗುರುವು ಉಚ್ಚ ಚಂದ್ರ ಹಾಗೂ ಶುಕ್ರನ ಮನೆಯಾದ ವೃಷಭದಲ್ಲಿ ಸ್ಥಿತನಾಗಿದ್ದಾನೆ. ಜಾತಕಿಯು ಸ್ವಂತ ಹೋಟೆಲ್ನಲ್ಲಿ ರುಚಿಯಾದ ಶುಚಿಯಾದ ಆಹಾರವನ್ನು ತಯಾರಿಸಿ ಗ್ರಾಹಕರಿಗೆ ನಗು ಮುಖದಿಂದ ಉಣ್ಣ ಬಡಿಸುತ್ತಾಳೆ. ಆಹಾರದಿಂದಲೇ ಆದಾಯಗಳಿಸುತ್ತಾಳೆ.
-
ಶನಿ- ಸಹೋದರ ಕಾರಕ ಶನಿಯು ಉಚ್ಚ ಗುರು ಹಾಗೂ ನೀಚ ಕುಜನ ಮನೆಯಾದ ಕಟಕ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಈತನು ಎಲ್ಲರಿಗೂ ಆಹಾರದ ಬಗ್ಗೆ ಉಪದೇಶ ಮಾಡುತ್ತಾನೆ. ಕಟಕ ರಾಶಿಯು ಚಂದ್ರನ ಮನೆಯಾದರಿಂದ ಈಕೆಯ ಸಹೋದರನು ಧಾನ್ಯಗಳ ವ್ಯಾಪಾರ ಮಾಡುತ್ತಿರುತ್ತಾನೆ.
-
ರಾಹು- ತಂದೆಯ ತಾಯಿ ತಂದೆ- ಉಚ್ಚ ಶನಿ ಹಾಗೂ ಶುಕ್ರನ ಮನೆಯಾದ ತುಲಾ ರಾಶಿಯಲ್ಲಿ ಸ್ಥಿತರಾಗಿದ್ದಾರೆ. ಇವರು ಅವರ ಹಳ್ಳಿಯ ನ್ಯಾಯ ಪಂಚಾಯತಿ ಮಾಡುತ್ತಿದ್ದರು ಹಾಗೂ ಶ್ರಮ ಜೀವಿಗಳಾಗ್ಗಿದ್ದರು.
-
ಕುಜ- ಗಂಡಾಕಾರಕ ಕುಜನು ಸಮಸ್ಯಾಸ್ಥಾನವಾದ ಕುಂಭ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಇದು ವಾಯು ತತ್ತ್ವವಾದ್ದರಿಂದ ಇವರನ್ನು ಯಾರು ಕಂಟ್ರೋಲ್ ಮಾಡಲು ಸಾದ್ಯವಿಲ್ಲ. ಇವರು ಯಾವಾಗಲು ರಹಸ್ಯವಾಗಿಯೇ ಎಲ್ಲ ಕೆಲಸ ಮಾಡುತ್ತಾರೆ. ರಹಸ್ಯವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಇವರು ಯಾವಾಗಲು ಮುಂದಿನ ಜೀವನದ ಬಗೆ ಯೋಚನೆ ಮಾಡುತ್ತಾರೆ.