ಕಷ್ಟ : ಸುಖ: ದು:ಖ ಎಲ್ಲಾ ಮನುಷ್ಯರ ಸ್ವಂತ ಕಲ್ಪನಾ ಸೃಷ್ಟಿಯೇ
ಮನುಷ್ಯರ ಸ್ವಂತ ಕಲ್ಪನಾ ಸೃಷ್ಟಿಯೇ ಹಗಲು ಕನಸು ಕಾಣುವ ಸ್ವಭಾವವಿದ್ದ ಒಬ್ಬ ಮನುಷ್ಯನು, ಒಂದು ದಿನ, ಹಸಿವಾದಾಗ ಆಹಾರವೇನೂ ಸಿಕ್ಕದಿರಲು, ದಾರಿಯಲ್ಲಿ ಒಂದು ಮರದ ಕೆಳಗೆ ಕುಳಿತು ಕಣ್ಣು ಮುಚ್ಚಿಕೊಂಡು, ಮನಸ್ಸಿನಲ್ಲಿ ಬಿಸಿಬಿಸಿ ರೊಟ್ಟಿಯನ್ನೂ ಚಟ್ಣಿಯನ್ನೂ ತಿನ್ನುವುದಕ್ಕೆ ತೊಡಗಿದನು. ಕಲ್ಪನಾ ಬಲವುಳ್ಳ ಆ ಬಡಪಾಯಿಯು, ಸ್ವಲ್ಪ ಹೊತ್ತು ಮೈಮರೆತು, ಆ ಬಿಸಿಬಿಸಿ ರೊಟ್ಟಿಯನ್ನು ತಿನ್ನುವುದರೊಳಗೆ, ಆ ಚಟ್ಣಿಯಲ್ಲಿ ಖಾರವಾದೊಂದು ಮೆಣಸಿನ ಕಾಯಿಯು ಬಂದಿತು. ಅದು ಬಹಳ ಖಾರವಾಗಿತ್ತು. ಬಿಸಿಯ ಜೊತೆಗೆ ಆ ಖಾರವೂ ಸೇರಿ, ಅವನ ಕಿವಿಗಳಲ್ಲಿ…